ಫೆಬ್ರವರಿ 21, 2018

ಮನಸ್ಸಿದ್ದರೆ ಮಾರ್ಗ ಅನ್ನೋ #ಹುಡುಗರು


ಹೀಗೇ ಬಸ್ ಅಲ್ಲಿ ಬರುವಾಗ, ಮೊಬೈಲ್ ನಲ್ಲಿ Subway Surfers ಆಡುತ್ತಿದ್ದೆ. Subway Surfers ಆ? ಹೆಸರು ಎಲ್ಲೋ ಹಳೇ ಹುಡುಗಿಯರ ಹಳೇ ನೆನಪಿನ ನಡುವಲ್ಲೆಲ್ಲೋ ಕೇಳಿದ ಹಾಗೆ ಇದೆಯಲ್ಲಾ ಅಂತ ಅಂದ್ಕೊಂಡ್ರಾ?!?  ಸುಮಾರು ನಾಲ್ಕು - ಐದು ವರ್ಷಗಳ ಹಿಂದೆ ನಾನು, ನಮ್ ಹುಡುಗರು ಈ ಗೇಮ್ ಅನ್ನು ಸಖತ್ತಾಗಿ ರುಬ್ಬಿ‌ ಬಿಸಾಕಿದ್ವಿ!!! ನಮ್ ಹುಡುಗರಿಗೆ ಅವರ ಹಳೇ ಹುಡುಗಿಯರು ನೆನಪಾಗಿ ನಮಗೆ ಫೋನ್ ಮಾಡಿ ತಲೆ ತಿನ್ನುತ್ತಾರಲ್ಲಾ, ಹಾಗೇ ಯಾವುದೋ ಹಳೆ ವಿಷಯದ ಕುರಿತು ಯೋಚಿಸುತ್ತಿದ್ದಾಗ ಮತ್ತೆ Subway Surfers ನೆನಪಾಯ್ತು. ಅರೇ ಇಸ್ಕಿ, ಧಾರವಾಹಿ, ಫಿಲಂಗಳ ನಡುವೆ ಮರೆತೇ ಹೋಗಿತ್ತಲ್ಲಾ ಅಂತ after a long time, ಇವತ್ತು ಮತ್ತೆ install ಮಾಡಿ ಆಡಲು ಶುರು ಮಾಡಿದೆ. ಈ ಆಟ ಒಂಥರಾ ಚಿಪ್ಸ್ ಪ್ಯಾಕೆಟ್ ಇದ್ದಂತೆ, ಶುರು ಮಾಡಿದರೆ, ಅಷ್ಟು ಬೇಗ ಮುಗಿಸದೇ ಕೆಳಗಿಡಲು ಮನಸ್ಸಾಗಲ್ಲ.

ಇಂತಿಪ್ಪ ಸಂದರ್ಭದಲ್ಲಿ, coming back to topic, ಇಂದು ಬಸ್ ನಲ್ಲಿ ಬರುತ್ತಾ Subway Surfers ಆಡಲು ಶುರು ಮಾಡಿದೆ. ಅದ್ಯಾಕೋ ಗೇಮ್ ಮ್ಯೂಸಿಕ್ ಸರಿ ಇಲ್ಲ ಅಂತ ಮ್ಯೂಟ್ ಮಾಡಿ, ಹಿನ್ನಲೆಯಲ್ಲಿ ಮ್ಯುಸಿಕ್ ಪ್ಲೇಯರ್ ನಲ್ಲಿ shuffled playlist ರೆಡಿ ಇತ್ತಲ್ಲಾ, ಅಲ್ಲಿ ಪ್ಲೇ ಕ್ಲಿಕ್ಕಿಸಿ, ಮತ್ತೆ ಆಟ ಮುಂದುವರೆಸಿದೆ. ಒಂದು ಎರಡು 'ಬೋರ್ ಹೊಡೆಸುವ ರೊಮ್ಯಾಂಟಿಕ್ ಹಾಡುಗಳ ನಂತರ' (!) ಢಣ್ ಢಣಣ್ ಢಣ್ ಅಂತ ಹುಡುಗರು ಚಿತ್ರದ ಶಂಭೋ ಶಿವ ಶಂಭೋ ಹಾಡು ಶುರುವಾಯಿತು. ಅಷ್ಟು ಹೊತ್ತಿಗಾಗಲೇ ಆಟದಲ್ಲಿ ಸ್ವಲ್ಪ ಮುಂದೆ ಹೋಗಿದ್ದರಿಂದ ನಮ್ಮ 'ಹುಡುಗ' ಇನ್ನೂ ಸ್ಪೀಡಾಗಿ ಮುಂದೆ ಓಡುತ್ತಿದ್ದ. ಹಾಡಿನಲ್ಲಿ ಬೀಟ್ಸ್, ಎಮೋಷನ್, ಢಣಣ್ ಅಂತ ಹಾಡಿನ ಓಘದೊಂದಿಗೆ ಏರುತ್ತಿದ್ದಂಗೆ ಸ್ನೇಹ, ತ್ಯಾಗ, ಪ್ರೀತಿಗಾಗಿ‌ ಮಾಡುವ ಹೋರಾಟದ ಎಲ್ಲಾ ಭಾವಗಳು ಮನದ ಹಿನ್ನೆಲೆಯಲ್ಲಿ ಅಪ್ಪು, ಕಿಟ್ಟಿ, ಲೂಸ್ ಮಾದ ರೂಪಕವಾಗಿ ಕಣ್ಣಿನ ಮುಂದೆ ಬಂದಂತಾಗುತ್ತಿತ್ತು.ಫೀಲ್ ಅಲ್ಲಿ ಮಿಸ್ ಆಗಿ ಆಗಿ ಟ್ರೈನ್ ಪಕ್ಕಕ್ಕೆ ಗುದ್ದಿಕೊಂಡೆ. ಹಿಂದೆ ಇದ್ದ ಪೊಲೀಸ್ ಮತ್ತು‌ ನಾಯಿ ಜ಼ುಗ್ ಅಂತ ಮುಂದೆ ಬಂದು ಬಿಟ್ಟರು. ಹುಡುಗರು ಫಿಲಂ ನಲ್ಲಿ ಅಷ್ಟೆಲ್ಲಾ ಕಷ್ಟಗಳ ನಡುವೆ ಒಂದು ಜೋಡಿಯನ್ನು ಒಂದು ಮಾಡಲು 'ಹುಡುಗರು' ಮಾಡುವ ಕಷ್ಟ ನೆನಪಾಗಿ ಸಡನ್ನಾಗಿ ನಾನೂ ಅಂತಹ ಒಂದು hypothetical chasing scene ನಲ್ಲಿ ಇದ್ದೀನಾ ಅನಿಸಿಬಿಡ್ತು!! ಇನ್ನೂ ಜಾಸ್ತಿ ಹೊತ್ತು ಆಡಿದರೆ ಗಂಗಾ ನಾಗವಲ್ಲಿ ಅಂತ ಅಂದು ಕೊಂಡು, ತಾನೂ ನಾಗವಲ್ಲಿ ಆದ ಹಾಗೆ, ನಾವೇನಾದರೂ ಪ್ರಭು (ಹುಡುಗರು ಚಿತ್ರದಲ್ಲಿ ಅಪ್ಪು ಹೆಸರು) ಆದರೆ ಓಕೆ, ಗ್ರಹಾಚಾರ ತಪ್ಪಿ ಲೂಸ್ ಮಾದ ಥರ ಕಿವಿನೋ, ಕಿಟ್ಟಿ ಥರ ಕಾಲು ಹೋಗಿ ಬಿಟ್ಟರೆ ಎಲ್ಲಿ ಸಹವಾಸ ಅಂತ ನಕ್ಕು ಸುಮ್ಮಾನಾದೆ.


ಈಗ ನಮ್ಮಲ್ಲಿ ಕಟ್ಟ ಕಡೆಯದಾಗಿ‌ ಉಳಿಯುವ ಪ್ರಶ್ನೆ, "ಹಳೇ ಹುಡುಗಿ ಅಚಾನಕ್ ಆಗಿ ನೆನಪಾದರೆ, ನೀವು ಫೋನ್ ಮಾಡಿ ಗೋಳು ಹೊಯ್ದುಕೊಳ್ಳುವ ನಿಮ್ಮ #ಹುಡುಗರು ಯಾರು??" 

ಫೆಬ್ರವರಿ 16, 2018

ನಾನೇನಾದರೂ CM / PM ಆದರೆ...

ಚಿಕ್ಕವನಿದ್ದಾಗ ಎರಡು ಪ್ರಶ್ನೆಗಳಿಗೆ ಎಲ್ಲರ ಉತ್ತರ ಸಂಗ್ರಹಿಸೋದೇ ನನಗೆ ಒಂದು ಕೆಲಸ ಆಗಿತ್ತು.

ಪ್ರಶ್ನೆ ಒಂದು: ದೊಡ್ಡವನಾದ ಮೇಲೆ ಏನಾಗ್ತೀಯಾ? 

ಪ್ರಶ್ನೆ ಎರಡು: ನೀನೇನಾದರೂ CM / PM ಆದರೆ ಮೊದಲು ಮಾಡುವ ಕೆಲಸ ಯಾವುದು?


Technically, ಈ ಎರಡೂ ಪ್ರಶ್ನೆಗಳು‌ contradictory. ದೊಡ್ಡವನಾದ ಮೇಲೆ ಏನಾಗ್ತೀಯಾ ಅನ್ನೋ ಪ್ರಶ್ನೆಗೆ ಗಗನಯಾತ್ರಿ, ಶಿಕ್ಷಕ, ಇಂಜಿನಿಯರ್, ಡಾಕ್ಟ್ರು ಇತ್ಯಾದಿ ಉತ್ತರಗಳು ರೆಡಿ ಇರುತ್ತಿದ್ದವು. ಆದರೆ CM / PM ಆದ ತಕ್ಷಣ ಏನು‌ ಮಾಡುತ್ತೀರಾ ಎಂಬ ಪ್ರಶ್ನೆಗೆ "ಶಾಲೆ ಮಕ್ಕಳಿಗೆ ಭಾನುವಾರ ಸ್ಪೆಷಲ್ ಕ್ಲಾಸ್ / ಟ್ಯೂಷನ್ ಹೆಸರಲ್ಲಿ ರೋಧನೆ‌ ಕೊಡಬಾರದು, ಆಟದ ಸಮಯದಲ್ಲಿ ಬೇರೆ ಕ್ಲಾಸ್ ಮಾಡಬಾರದು" ಇತ್ಯಾದಿಯಾಗಿ ನಮ್ಮದೇ ತರಲೆ ವ್ಯಾಪಾರದ ಐಡಿಯಾಗಳು‌ ನಮ್ಮಲ್ಲಿದ್ದವು. "ದೊಡ್ಡವನಾದ ಮೇಲೆ ಏನಾಗ್ತೀಯಾ" ಅನ್ನೋ ಪ್ರಶ್ನೆಗೆ ಸಾವು ಬಂದಾಯ್ತು. ಈಗಾಗಲೇ ಎರಡು ಕತ್ತೆ ವಯಸ್ಸಾಗಿದೆ. So, ಇಂದಿಗೂ, ಇವತ್ತಿಂದ ಇನ್ನೂ ಇಪ್ಪತ್ತು ವರ್ಷಗಳ ನಂತರವೂ ಕೇಳಬಹುದಾದ ಪ್ರಶ್ನೆ: "ನೀನು CM /  PM ಆದರೆ ಏನು ಮಾಡುತ್ತೀಯಾ?" 


ಸೋಜಿಗ ಏನಪ್ಪಾ ಅಂದರೆ, ‌ಈ ಪ್ರಶ್ನೆಗೆ ಹದಿನೈದು ವರ್ಷಗಳ ಹಿಂದೆ ಉತ್ತರ ಬೇರೆ ಆಗಿತ್ತು, ಈಗ ಬೇರೆ ಆಗಿದೆ, ಮುಂದೆ ಇನ್ನೂ ಬೇರೆ ಏನೋ ಆಗುವುದರಲ್ಲಿ ಸಂಶಯ ಬೇಡ. It's like defining happiness. Then, Happiness was having ice candy at nagesh parlor. It's different now and will change in future. ಈ ಎಲ್ಲಾ ಆಲೋಚನೆ ಶುರುವಾಗಿದ್ದು ಎರಡು ಕಾರಣಗಳಿಂದ.


ಒಂದು: ನಾನು House of Cards ಧಾರವಾಹಿ ನೋಡಲು ಶುರು ಮಾಡಿರೋದರಿಂದ. Political Drama ನಮಗೆ, ಅಲ್ಲಲ್ಲ ನನಗೆ ವೈಯಕ್ತಿಕವಾಗಿ ತುಂಬಾ ಹೊಸ genre. ಈ ನಿಟ್ಟಿನಲ್ಲಿ ಹೀಗೂ ಕಥೆ ನಿರೂಪಣೆ ಮಾಡಬಹುದಾ ಎಂದು ಅಚ್ಚರಿಯಾಗಿದೆ. Kevin Spacey, Robin Wright, Kate Mara ಮತ್ತು ಇನ್ನಿತರರನ್ನು ಒಳಗೊಂಡ  ಧಾರವಾಹಿ ಹಲವಾರು ಕಾರಣಗಳಿಂದ ವಿಶಿಷ್ಟ. ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ.


ಎರಡು: ನಾಲ್ಕು ವರ್ಷದ ರಾಜ್ಯ ಆಡಳಿತವನ್ನು ಮುಗಿಸಿದ ಸಿಎಂ ಸಿದ್ಧರಾಮಯ್ಯ ಮತ್ತು ಮೂರು ವರ್ಷ ಕೇಂದ್ರ ಆಡಳಿತ ಮುಗಿಸಿದ ಪಿಎಂ ನರೇಂದ್ರ ಮೋದಿ. ನಮ್ಮ ದೇಶದಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಮೂರು ಕ್ಷೇತ್ರಗಳೆಂದರೆ: ಸಿನಿಮಾ, ರಾಜಕೀಯ ಮತ್ತು ಕ್ರಿಕೆಟ್. ಈ ಮೂರರಲ್ಲಿ ಆಸಕ್ತಿ ಇರುವವರಿಗೆ ಬೇರೆ ಮನೋರಂಜನೆ ಅಗತ್ಯ ಇಲ್ಲ ಎಂಬುದು ಕೂಡ ಸತ್ಯ.


ಮೊದಲು ಒಂಥರಾ ಚೆನ್ನಾಗಿತ್ತು, ರಾಜಕೀಯ ನಾಯಕರೆಲ್ಲಾ ಎಲೆಕ್ಷನ್ ಸಂದರ್ಭದಲ್ಲಿ ಮತ ಯಾಚಿಸಲು ಮನೆಗೆ ಬಂದಾಗ, ಜನರು ನಮ್ಮ ವೋಟ್ ನಿಮಗೆ ಎಂದು ಭರವಸೆ ನೀಡಿ ಕಳುಹಿಸುತ್ತಿದ್ದರು. ಆಮೇಲೆ ತಮಗೆ ಯಾರು ಬೇಕೋ ಅವರಿಗೆ ಮತ ಹಾಕುತ್ತಿದ್ದರು. ಯಾರು ಯಾರಿಗೆ ವೋಟ್ ಮಾಡಿದರು ಎಂದು ಅವರೊಬ್ಬರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕಟ್ ಮಾಡಿದ್ರೆ 201೮.  ಸಾಮಾಜಿಕ ಜಾಲತಾಣಗಳಲ್ಲಿ ನಮಗೇ ಗೊತ್ತಿಲ್ಲದೇ ನಾವು ನಿರಂತರ ರಾಜಕೀಯ ಸ್ಕೀಮುಗಳನ್ನು ಪರಾಮರ್ಶಿಸುತ್ತೇವೆ. ಅನ್ನ ಭಾಗ್ಯ ಯೋಜನೆಯ 'ಮಿಸ್ಟೀಕ್' ಏನು, ಡಿಜಿಟಲ್ ಇಂಡಿಯಾ' ಮುಂದಿರುವ ಸವಾಲುಗಳೇನು? ಎಲ್ಲದರಲ್ಲೂ ನಮ್ಮ ಅಭಿಪ್ರಾಯ ಇದ್ದೇ ಇರುತ್ತದೆ. ಮತ್ತೆ ನಾವು ಪಬ್ಲಿಕ್ ಆಗಿ ನಮ್ಮ ಮೆಚ್ಚಿನ ರಾಜಕೀಯ ನಾಯಕರ, ಪಕ್ಷಗಳ ಸಾಧನೆಗಳನ್ನು, ಇತರರ ತಪ್ಪುಗಳನ್ನು ಓಪನ್, ಓಪನ್ ಆಗಿ ಟೀಕೆ ಮಾಡಲು ಶುರು ಮಾಡಿದ್ದೇವೆ. ಗೋ ಹತ್ಯೆ ನಿಷೇಧದ ಪರಿಣಾಮಗಳೇನು, ರಾಜ್ಯದ ಕಾವೇರಿ ಸಮಸ್ಯೆಗೆ ಪರಿಹಾರ ಹೇಗೆ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ, ಒಳ್ಳೆಯದು. ಆದರೆ ನಾನು ಕಂಡಂತೆ ಇತರ ರಾಜಕೀಯ ಪಕ್ಷ ಬೆಂಬಲಿಸುವವರನ್ನು ಬೈಯ್ಯುವ, ಸ್ನೇಹದ ಮಧ್ಯ ರಾಜಕೀಯದ ಗೋಡೆ ಕಟ್ಟುವ ಕೆಲಸ ಆಗಬಾರದು. ಯಾರು ಯಾರನ್ನಾದರೂ ಬೆಂಬಲಿಸಲಿ, ಆದರೆ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸದೇ ಏಕಮುಖ ವಾದಗಳಿಂದ ಯಾರಿಗೂ ಲಾಭವಿಲ್ಲ. ಅದನ್ನು ಅರಿತು ಮುಂದೆ ಸಾಗೋಣ.


ಇಷ್ಟು ಆದ ಮೇಲೆ ಬೇತಾಳನ ರೀತಿ ನನ್ನದೊಂದು ಚಿಕ್ಕ ಪ್ರಶ್ನೆ: ನೀವು CM / PM ಆದರೆ ಮೊದಲು ಮಾಡುವ ಕೆಲಸ ಏನು?

La La Land



Luckily, no one asked me what my valentine's day plan was!! Thank God, otherwise, it would be awkward to answer, I'm waiting from a week to watch La La Land!! 浪浪 La La Land is a musical story of a struggling pianist and a struggling actress who eventually fall in love. ❤❤ 

So far, so good!! But it's not everything.
La La Land beautifully portrays the struggles happen behind the screen, the lovely feeling of falling in love, the price of keeping it alive, following your dreams or being part of someone else's dream etc. La La Land is also magnificent because of constant switching on / off of spotlight which gives the theatre skit feeling  Memorable music and BGM, rocking dialogues and double twists and the end.. I will always love you, La La Land 


#lalaland #cityofstarsareyoushiningjustforme #iwillalwaysloveyou #herestotheheartsthatbreak  #herestothemesswemake

ಫೆಬ್ರವರಿ 14, 2018

ಕಡಲ ಮೌನ

ಕಡಲ ಮೌನದ ಹಾಗೆ
ಮನವು ಸುಮ್ಮನೆ ಕುಳಿತಿತ್ತು
ನಾಳೆಯ ಚಿಂತೆಯು ಆವರಿಸಿ
ಇಂದು ಮಂಕು ಕವಿದಿತ್ತು

ಒಮ್ಮೆಲೇ ಗಾಳಿ ಬೀಸಿ
ಗಾಳಿಪಟ ಹಾರಿ ಬಂದಿತ್ತು,
ಅದರ ಮೇಲಣ ಯಾವುದೋ
ಕವಿತೆ ಬರೆದಂತೆ ಅನಿಸಿತ್ತು

ಕರದಲ್ಲಿ ಹಿಡಿದು ನೋಡಿದೆ
ಪ್ರೇಮ ಪತ್ರವೊಂದು ಅಲ್ಲಿತ್ತು,
ನಾಲ್ಕು ಸಾಲಿನ ಹಾಡಿನಲ್ಲಿ
ಆಶಾ ಭಾವವೇ ಹರಿದಿತ್ತು

ಸುಂದರ ನಿನ್ನೆಯ ನೆನೆದು
ಇಂದೇಕೆ ಅಳುವೆ ಮೇಘವೇ,
ಹೊಸ ಪಯಣವ ಶುರು ಮಾಡಿ
ನಾಳೆಯು ನಮ್ಮದೇ ಎನ್ನೋಣವೇ
- ಅರುಣ್ ಕುಮಾರ್ ಪಿ ಟಿ