ಜುಲೈ 19, 2016

ನಗು ನಗುತಾ ನಲಿನಲಿ 🎶🎶


ಎಲ್ಲಾ ಜೋಕುಗಳ ಹಿಂದೆ ಇನ್ನೊಬ್ಬರನ್ನು ನಗಿಸುವ ಉದ್ದೇಶ ಇದ್ದೇ ಇರುತ್ತೆ.
ಆದರೆ ಗಮ್ಮತ್ತ್ ಏನಪ್ಪ‌ ಅಂದರೆ ಎಲ್ಲಾ ಜೋಕುಗಳು ಎಲ್ಲರಿಗೂ ಅರ್ಥ ಆಗಲ್ಲ.
ನಮ್ ಚಳ್ಳಕೆರೆ ಹುಡುಗರ 'okay' ಜೋಕುಗಳು ನಮ್ ಕಾಲೇಜ್ ಹುಡುಗರಿಗೆ ಗೊತ್ತಿಲ್ಲ.
ನಮ್ ಕಾಲೇಜಿನ 'more reading more confusion' ಜೋಕುಗಳು ನಮ್ ಚಳ್ಳಕೆರೆ ಹುಡುಗರಿಗೆ ಅರ್ಥ ಆಗಲ್ಲ ಇತ್ಯಾದಿ.
ಅದು ಬಿಡಿ, ಇನ್ನೂ ಕೆಲವು‌ ಸಲ ಕೆಲವು ಜೋಕುಗಳು ಎಷ್ಟು advanced ಆಗಿರುತ್ತವೆ ಅಂದರೆ ಯಾರೂ ನಗದೇ ಇರೋದನ್ನು ನೋಡಿ ಹಿಂಗಿಂಗೆ ಮಗಾ, ಹಿಂಗಿಂಗೆ ಅಂತ ವಿವರಿಸಿ ಹೇಳಬೇಕಾಗುತ್ತದೆ.
ದುರದೃಷ್ಟವಶಾತ್, ಬೇರೆಯವರಿಗಿಂತ ಈ ಥರ ಅನುಭವ ನನಗೇ ಜಾಸ್ತಿ ಸಲ ಆಗಿರೋದು.
ವಿಷಯ ಏನಪ್ಪ ಅಂದರೆ ಚಿಕ್ಕವನಿದ್ದಾಗ ಸಿನಿಮಾದಲ್ಲಿ ಅಳೋದಕ್ಕೆ ಗ್ಲಿಸರೀನ್ ಬಳಸುತ್ತಾರೆ ಅಂತ ತುಂಬಾ ತಡವಾಗಿ ಗೊತ್ತಾಯಿತು. ಆದರೆ ನಗೋದಕ್ಕೆ?
ನಗೋದಕ್ಕೆ ನೈಟ್ರಸ್ ಆಕ್ಸೈಡ್ NOS ಬಳಸುತ್ತಾರೆ ಅಂತ ಇಸ್ಕೂಲಲ್ಲಿ‌ ನಮ್‌ ಮಿಸ್ ಹೇಳಿದ್ರು. ಆದರೂ‌ ಕೆಲವು ಸಂದರ್ಭಗಳಲ್ಲಿ ಕಲಾವಿದರು ಯಾವುದೇ ಕೆಮಿಕಲ್ ಸಹಾಯವಿಲ್ಲದೆ ನಗುವ / ಅಳುವ ಸಂದರ್ಭ ಬರುತ್ತದೆ. ಆದರೆ ಅಂಥ ಕ್ರಿಟಿಕಲ್ ಸನ್ನಿವೇಶಗಳಲ್ಲಿ ನಗು ಬರದೇ ಇದ್ದರೂ ಹೆಂಗೆ ನಗುತ್ತಾರೆ ಈ ಲಾಫಿಂಗ್ ಕ್ಲಬ್ ಗಳಲ್ಲಿ ವಯಸ್ಸಾದವರು ಹ್ಹ ಹ್ಹಾ ಹ್ಹಾ, ಓಹೋ ಹ್ಹೋ ಹ್ಹೋ ಅಂತ ಅದು ಹೆಂಗೆ ನಗುತ್ತಾರೆ ಅನ್ನೋ ಕುತೂಹಲಕ್ಕೆ ಇಷ್ಟು ವರ್ಷಗಳು ಉತ್ತರ ಸಿಕ್ಕಿರಲಿಲ್ಲ. ಹೀಗೆ ಕೆಲವು‌ ದಿನಗಳಿಂದ ಹಾಗೇ ಸುಮ್ಮನೆ ನನ್ ಲೈಫಿನ ಕಡೆ ಕಣ್ಣು ಹಾಯಿಸಿದಾಗ ನನಗೇ ಒಂಥರಾ ನಗು ಬರೋಕೆ ಶುರುವಾಯಿತು. ಕಣ್ಣ ಮುಂದೆ ಉತ್ತರ ರಪ್ಪ್ ಅಂತ ಪಾಸಾದಂಗಾಯಿತು. Who needs April Fools when ur whole life is a joke ಅಂತ ಒಮ್ಮೆ 9gag ಜಾಲತಾಣದಲ್ಲೊಮ್ಮೆ ಓದಿದ್ದೆ.


ನಮ್ ಜೀವನ ಕೂಡ ಈಗ ಹೆಚ್ಚು ಕಮ್ಮಿ ಹಂಗೇ ಆಗಿದೆ.
ಹೆಂಗಿದೆ ಮಗಾ‌ ನಿನ್ ಲೈಫು ಅಂದರೆ "ಅಯ್ಯೋ ಒಳ್ಳೆ ಕರ್ಪೂರದ ಗೊಂಬೆ ಶೃತಿ ಥರ ಆಗಿದೆ" ಅಂದರೆ ಅಯ್ಯೋ ಪಾಪ ‌ಅಂತ‌ ಮರುಕ ಪಟ್ಟು ಸುಮ್ಮನಾಗಬಹುದು.
ಲೈಫಲ್ಲಿ ಜೋಕಿದ್ದರೆ ಓಕೆ, ಲೈಫೇ ಜೋಕಾಗಿರುವಾಗ ಏನ್ ಮಾಡೋದು?
ಹ್ಜ ಹ್ಹಾ ಹ್ಹಾ ಎಂದು ನಗುತ್ತಾ ಹಿಂಗೇ ಮಂಗನ ಕೈಯಲ್ಲಿ ಆಂಡ್ರಾಯ್ಡ್ ಫೋನ್ ಸಿಕ್ಕಂತೆ ಮನಸ್ಸಿಗೆ ಬಂದಿದ್ದು ಟೈಪ್ ಮಾಡಿ ಪೋಸ್ಟ್ ಮಾಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ