ಫೆಬ್ರವರಿ 14, 2015

Valentine’s Day: ಒಂದು ಅವಲೋಕನ

ನಿನ್ನ ಬೆರಳು ಹಿಡಿದು ನಾನು, ನೀರ ಮೇಲೆ ಬರೆಯಲೇನು?
ನಿನ್ನ ನೆರಳು ಸುಳಿಯುವಲ್ಲೂ, ಹೂವ ತಂದು ಸುರಿಯಲೇನು?
ನಂಬಿ ಕೂತ ಹುಂಬ ನಾನು, ನೀನೂ ಹೀಗೇನಾ?
-
ಜಯಂತ್ ಕಾಯ್ಕಿಣಿ

ಮೊದಲನೆಯದಾಗಿ ಎಲ್ಲರಿಗೂ Happy Valentine's Day. ವ್ಯಾಲೆಂಟೈನ್ಸ್ ಡೇ / ಪ್ರೇಮಿಗಳ ದಿನ ಕೇವಲ ಪ್ರೇಮಿಗಳಿಗಾಗಿ, ಎಲ್ಲರಿಗೂ ಯಾಕಪ್ಪ wish ಮಾಡ್ತಾ ಇದ್ದೀಯಾ? ಅಂತ ಕೇಳದೆ ಮುಂದೆ ಓದಿ.
Valentine's Day ಅಥವಾ St. Valentine's Day ಅಂದರೆ ಏನು? ಯಾಕೆ ಇದನ್ನು ಆಚರಿಸಲಾಗುತ್ತದೆ ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಿದಾಗ ಕೆಲವು ಕಥೆಗಳು ಮತ್ತು ಕೆಲವು conspiracy theoryಗಳೂ ಸಿಕ್ಕವು. ಅದರ ಸಾರ ಇಷ್ಟೇ: ಏಸು ಕ್ರಿಸ್ತನ ಜನನದ ಸರಿಸುಮಾರು 300 ವರ್ಷಗಳ ನಂತರದ ಸಮಯದಲ್ಲಿ ರೋಮ್ ರಾಜ ಇಮ್ಮಡಿ ಕ್ಲಾಡಿಯಸ್ ತನ್ನ ಸೈನ್ಯವನ್ನು ಬಲಪಡಿಸಲು ಅವಿವಾಹಿತ ಪುರುಷರೇ ಯೋಗ್ಯರು, ಪ್ರೀತಿಸಿರುವ / ಮದುವೆಯಾಗಿರುವ ಸೈನಿಕರು ಹೆಚ್ಚು ಭಾವುಕರಾಗಿರುವ ಕಾರಣದಿಂದ ಅವರು ದೇಶ ಕಾಯಲು ಯೋಗ್ಯರಲ್ಲ ಎಂದು ಬಲವಾಗಿ ನಂಬಿದ್ದನು. ಆದ್ದರಿಂದ ಸೈನಿಕರು ಮದುವೆಯಾಗುವುದನ್ನು ನಿರ್ಬಂಧಿಸಿದ್ದನು. ಇದರಿಂದ ಎಷ್ಟೋ ಜನ ಸೈನಿಕರು ದುಃಖಿತರಾಗಿದ್ದರು. ಆದ್ದರಿಂದ ಸಂತ ವ್ಯಾಲೆಂಟೈನ್ ಸೈನಿಕರನ್ನು ಅವರು ಪ್ರೀತಿಸಿದವರ ಜೊತೆ ಮಾಡುವೆ ಮಾಡಿಸುತಿದ್ದನು. ಇದನ್ನು ತಿಳಿದ ರಾಜ ಇಮ್ಮಡಿ ಕ್ಲಾಡಿಯಸ್, ಸಂತ ವ್ಯಾಲೆಂಟೈನ್ ಅನ್ನು ನೇಣು ಶಿಕ್ಷೆಗೆ ಗುರಿಪಡಿಸಿದನು. Storyಯಲ್ಲಿ ಟ್ವಿಸ್ಟ್ ಏನಪ್ಪಾ ಅಂದ್ರೆ, ಸಂತ ವ್ಯಾಲೆಂಟೈನ್ ಕೂಡ ಸೆರೆಮನೆಯ ಜೈಲರ್ ಮಗಳನ್ನು ಪ್ರೀತಿಸಿದ್ದನು. ಅವನು ಸಾಯುವ ಹಿಂದಿನ ದಿನ ಅವಳಿಗೆ ಒಂದು ಪತ್ರ ಬರೆದು, "Love, Valentine" ಎಂದು ಸಹಿ ಮಾಡಿದ್ದನು. ತನ್ನ ಪ್ರೀತಿ ಸುಖಾಂತ್ಯ ಕಾಣದಿದ್ದರೂ ಇನ್ನೊಬ್ಬರ ಪ್ರೀತಿಗೆ ನೆರವಾದನೆಂದು ಸಂತ ವ್ಯಾಲೆಂಟೈನ್ ನೆನಪಿನಲ್ಲಿ ಪ್ರೇಮಿಗಳಿಗಾಗಿ ಒಂದು ದಿನವನ್ನು dedicate ಮಾಡಲಾಗಿದೆ. ಇದನ್ನು ಓದಿದ ಕೂಡಲೇ ನಮ್ಮ ಕನ್ನಡ ಫಿಲಂನ ತ್ಯಾಗರಾಜ ರಮೇಶ್ ಅರವಿಂದ್ (no offense), ಮುಂಗಾರು ಮಳೆ ಗಣೇಶ್, ಮಠ ಸಿನಿಮಾದ ತಾರಾ-ಜಗ್ಗೇಶ್ ಅಭಿನಯದ ಒಂದು ಉಪಕಥೆಯಲ್ಲಿ ಬರುವ ಮೊಘಲ್ ದೊರೆ ನೆನಪಾಗಿದ್ದು ಸುಳ್ಳಲ್ಲ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನೋದು ನನಗೂ ಗೊತ್ತಿಲ್ಲ. ಇರಲಿ, ಸದ್ಯಕ್ಕಿಷ್ಟು ಹಿಸ್ಟರಿ ಕ್ಲಾಸ್ ಸಾಕು!
ಸಾಂದರ್ಭಿಕ ಚಿತ್ರ: Person of Interest

ಈಗ ವಿಷಯಕ್ಕೆ ಬರ್ತೀನಿ. ಬದುಕು ಎಂಬುದು ಪದೇ ಪದೇ ಚಿತ್ರೀಕರಣವಾಗುವ ಅದೇ ಸಿನಿಮಾ ಎಂಬುದು ನನ್ನ ಅಭಿಪ್ರಾಯ. ಉದಾಹರಣೆಗೆ, LKG ಗೆ ಸೇರುವಾಗ ಹೆದರಿಕೊಂಡಿದ್ದು, ಮತ್ತೆ ಯಾವಾಗಲೋ 1st Rank ಬಂದಿದ್ದು, homework ಮಾಡಿಲ್ಲ ಅಂತ ಕ್ಲಾಸ್ ಹೊರಗೆ ನಿಂತಿದ್ದು, ಕಾಲೇಜ್ ಗೆ ಬಂಕ್ ಹಾಕಿ ಫಿಲಂಗೆ ಹೋಗಿದ್ದು, ಮೊದಲ ಬಾರಿ ಪ್ರೀತಿಸಿದವರ ಜೊತೆ ಕೈ ಹಿಡಿದು ನಡೆದಿದ್ದು, ಮೊದಲ ಸಂಬಳ ಪದೇ ಪದೇ ಎಣಿಸಿದ್ದು, ಹೀಗೆ ಹಲವು ಪ್ರಸಂಗಗಳು ಎಲ್ಲರ ಬದುಕಿನಲ್ಲೂ ಇವೆ. ಅದು ಆಗುವ ಜಾಗ, ಜೊತೆಯಾಗುವ ವ್ಯಕ್ತಿಗಳು, ಸಮಯ ಬೇರೆ ಅಷ್ಟೇ! ಇಷ್ಟೆಲ್ಲಾ ಕಂತೆ ಪುರಾಣ ಹೇಳಿದ್ದು, ವ್ಯಾಲೆಂಟೈನ್'ಸ್ ಡೇ ಪ್ರಸಂಗದ ಬಗ್ಗೆ ಹೇಳುವುದಕ್ಕಾಗಿ. ನೀವು observe ಮಾಡಿದ್ದೀರೋ ಇಲ್ಲವೋ ಗೊತ್ತಿಲ್ಲ, ವರ್ಷ ನೀವಿದ್ದ ಹಂತದಲ್ಲಿ ಮುಂದಿನ ವರ್ಷ ಇನ್ನೊಬ್ಬರು ಇರುತ್ತಾರೆ. Like crush ಹಂತ, propose ಹಂತ, breakup ಹಂತ, trying to get back together ಹಂತ, move on ಹಂತ ಇತ್ಯಾದಿ. 'ಹೇಗಾದರೂ different ಆಗಿ propose ಮಾಡಬೇಕು ಐಡಿಯಾ ಕೊಡು ಮಗಾ' ಅನ್ನೋರುಹಳೇ ಪ್ರೀತಿ ನೆನಪಲ್ಲಿ ಎಲ್ಲರನ್ನು ಉಗಿಯುತ್ತಾ ಓಡಾಡುವವರು, ಇಷ್ಟು ವರ್ಷ ಆಗಿದ್ರೂ ನನ್ನ ಮುಖಕ್ಕೆ ಒಂದು ಹುಡುಗಿ ಸಿಗಲಿಲ್ಲ ಅಂತ ಪರಿತಪಿಸುವವರು, ಇರುವ ಪ್ರಿಯತಮೆಗೆ (sometimes ಪ್ರಿಯತಮನಿಗೆ) ಮುದ್ದಾದ ಉಡುಗೊರೆ ನೀಡುವವರು, ಕಳೆದುಕೊಂಡ ಹುಡುಗನಿಗಾಗಿ ಕಣ್ಣೇರು ಹಾಕುವವಳು, ಕೆಲಸವಿಲ್ಲದೇ ಹೀಗೆ ಬ್ಲಾಗ್ ಬರೆಯುವವರು, ಹೀಗೆ ಅನೇಕ ಬಗೆಯ ಕಥೆಗಳು ನಮ್ಮ ನಡುವೆ ಸಿಗುತ್ತವೆ. ವರ್ಷ ಇದ್ದ ಹಾಗೆ ಮುಂದಿನ ವರ್ಷ ಇರುವುದಿಲ್ಲ (ಇದ್ರೆ ತುಂಬಾ ಒಳ್ಳೇದು). ಆದರೆ ಪ್ರೀತಿ ಇದ್ದೇ ಇರುತ್ತದೆ, ಕಡೆ ಗಮನ ಕೊಟ್ಟಿರೋದಿಲ್ಲ. ಹುಟ್ಟಿದಾಗಿನಿಂದ ಉಸಿರಾಡುತ್ತಿರುತ್ತೇವೆ, ಆದರೆ ಓಡಿದಾಗಲೇ ಉಸಿರಾಡುತ್ತಿರುವುದು ಇನ್ನಷ್ಟು ಆಳವಾಗಿ ಅರ್ಥವಾಗುತ್ತದೆಯಲ್ಲ, ಇದೂ ಹಾಗೆಯೇ ಅಂತ ನಮ್ ಹುಡುಗ ಒಮ್ಮೆ ಹೇಳಿದ್ದ. ಅವನು ಹೇಳಿದ್ದು ನನಗೂ ಬಹಳ ಸಲ ಸರಿ ಅನಿಸಿದೆ.
ವ್ಯಾಲೆಂಟೈನ್'ಸ್ ಡೇ ದಿನ ಪ್ರತಿ ವರ್ಷ ಗಮನಿಸಬಹುದಾದ ಇನ್ನೊಂದು ಅಂಶವೆಂದರೆ ಟಿವಿಯಲ್ಲಿ ಬರುವ ಚರ್ಚೆಗಳು. ವ್ಯಾಲೆಂಟೈನ್'ಸ್ ಡೇ ನಮ್ಮ ದೇಶದ ಸಂಸ್ಕೃತಿಗೆ ಮಾರಕವೆಂದು ವಿರೋಧಿಸುವವರು ಒಂದು ಕಡೆ, ಪ್ರೇಮಿಗಳ ದಿನವನ್ನು ನಮ್ಮ ಪಾಡಿಗೆ ನಾವು ಆಚರಿಸಿಕೊಳ್ಳುತ್ತೀವಿ, moral policing ಮಾಡಲು ನೀವ್ಯಾರು ಎನ್ನುವವರು ಇನ್ನೊಂದು ಕಡೆ. ಕಡೆ ಅವರು ಹೇಳೋದೂ ಸರಿನೇ, ಕಡೆ ಇವರು ವಾದವೂ ತಪ್ಪಲ್ಲ. ಕಂಡಕಂಡಲ್ಲಿ ಕೈ ಹಿಡ್ಕೊಂಡು ಓಡಾಡ್ತಾ ನಮ್ಮ ಪರಂಪರೆ ಹಾಳು ಮಾಡ್ತಾರೆ ಅನ್ನೋದು ಅವರ ಆರೋಪವಾದರೆ, ಪ್ರೀತಿಸಿದವರ ಜೊತೆ ನೆಮ್ಮದಿಯಾಗಿ ಐದು ನಿಮಿಷ ಮಾತನಾಡಲು ಬಿಡೋದಿಲ್ಲ ಅಂತ ಇವರು ಆಪಾದಿಸುತ್ತಾರೆ. ನನ್ನ ಅಭಿಪ್ರಾಯ ಕೇಳೋದಾದರೆ, ಪ್ರೇಮಿಗಳನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ. ಯಾರೂ ಮದುವೆಯ ಮೂಲಕ ಒಂದು ಮಾಡೋದೂ ಬೇಕಾಗಿಲ್ಲ, moral policing ನೆಪದಲ್ಲಿ ಬೇರೆ ಮಾಡೋದೂ ಬೇಕಾಗಿಲ್ಲ. ಅವರಿಗೆ ಎಲ್ಲವೂ ಸರಿಹೋದರೆ, ಜೊತೆಯಾಗಿ ನೂರು ಕಾಲ ಸಂಸಾರ ಮಾಡಿ ಮಾದರಿಯಾಗಿ ಬಾಳುತ್ತಾರೆ. ಇಲ್ಲವಾದರೆ, ನಮ್ದು south end circle, ನಿಮ್ದು east end circle ಅಂತ ಬೇರೆಯಾಗುತ್ತಾರೆ.
ಸಾಂದರ್ಭಿಕ ಚಿತ್ರ: ಪರಮಾತ್ಮ

Rose ಹಿಡ್ಕೊಂಡು ಓಡಾಡೋ ದಿನ, ಪೆನ್ ಹಿಡ್ಕೊಂಡು ಏನೇನೋ ಬರೆದು ನಿಮ್ಮ ಸಮಯ ಹಾಳು ಮಾಡಿದೆ ಅಂತ ಬೇಜಾರಾಗಬೇಡಿ. ಎಂದಿನ ಹಾಗೆ ಇಂದೂ ಕೂಡ ನನ್ನ ತಪ್ಪನ್ನು ನಿಮ್ಮ ಹೊಟ್ಟೆಗೆ ಹಾಕ್ಕೊಳ್ಳಿ .
Happy Valentine's Day again!!

ಬಾಟಮ್ ಲೈನ್:
ಪ್ರೀತಿ ಮಾಡಬೇಕಿರುವವರು: ಇನ್ನೂ ಪ್ರೀತಿ ಮಾಡಿಲ್ಲ ಅಂತ ಬೇಜಾರಾಗಬೇಡಿ, ಪ್ರೀತಿ ಮಾಡೋದಲ್ಲ, ಆಗೋದು. ತೊಂದರೆ ಇಲ್ಲ, ಇನ್ನೂ ಟೈಮ್ ಇದೆ. ಸಿಂಗಲ್ ಲೈಫ್ ಮತ್ತೆ ಸಿಗಲ್ಲ, ಆರಾಮಾಗಿ ಎಂಜಾಯ್ ಮಾಡಿ.
ಪ್ರೀತಿ ಮಾಡುತ್ತಿರುವವರು: Unconditional Love ಎಂಬುದು ನಿಜ ಎಂದು ನಿರೂಪಿಸಿ. ನೂರು ಕಾಲ ಸಂಸಾರ ಮಾಡಿ ಹಾಯಾಗಿರಿ. ಕಾಲ ಕ್ರಮೇಣ ನಿಮ್ಮ ಹೆಂಡತಿ ದಪ್ಪ ಆದ್ರೆ, ಇಲ್ಲವೇ ನಿಮ್ಮ ಯಜಮನ್ರು ಬಾಂಡ್ಲಿ ಆದ್ರೆ, ನೂರು ಕಾಲ ಜೊತೆಯಾಗಿ ಬದುಕಲು ಹೇಳಿದ್ದು ನಾನು, ತಪ್ಪು ನಂದೇ ಅಂತ ನನಿಗೆ ಹೋಡಿಯೋಕೆ ಬಂದುಬಿಟ್ಟೀರಾ!!
ಪ್ರೀತಿ ಕಳೆದುಕೊಂಡಿರುವವರು: ನೀವು ಮ್ಯೂಸಿಕ್ ಅನ್ನು ಮದುವೆಯಾಗುವುದು ಒಳಿತು. ನಿಮ್ಮ ಹುಡುಗ/ಹುಡುಗಿಯ ಸ್ಥಾನವನ್ನು ಯಾರಿಂದಲೂ replace ಮಾಡಲು ಸಾಧ್ಯವಿಲ್ಲ. ಆದರೆ ಸಂಗೀತ ಒಂದು ಗ್ಯಾಲಕ್ಸಿ ಇದ್ದ ಹಾಗೆ, ಅಲ್ಲಿ ಎಲ್ಲವೂ ಇದೆ: ದುಖ, ಸುಖ, ಖುಷಿ, ಹತಾಶೆ, ವೇದಾಂತ ಇತ್ಯಾದಿ. ನಿಮ್ಮ-ಅವರ ನೆನಪನ್ನು ಜೀವಂತವಿಡಲು ಸಂಗೀತದಿಂದ ಮಾತ್ರ ಸಾಧ್ಯ. Move On, ಅಷ್ಟೇ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ